Search This Blog

Friday, July 30, 2010

ಮಂಕುತಿಮ್ಮ ನ ಕಗ್ಗ ೭


ಚೆಲುವುನಗುಗಳ ಕಂಡವನ ಕಣ್ಣರಳುವುದು|
ಅಳುವುನೋವುಗಳ ಕಂಡೊದ್ದೆಯಾಗುವುದು||
ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು|
ಶಿಲೆಯಲ್ಲ ಯೋಗಿಯೆದೆ-ಮಂಕುತಿಮ್ಮ||

 

Tuesday, May 11, 2010

ಮಂಕುತಿಮ್ಮ ನ ಕಗ್ಗ ೬





ಬದುಕಿಗಾರ್ ನಾಯಕರು, ಏಕನೋ ಅನೇಕರೋ? |
ವಿಧಿಯ ಪೌರುಷವೋ ಧರುಮವೊ ಅಂಧಬಲವೋ?||
ಕುದುರುವುದೆಂತು ಈಯವ್ಯವಸ್ಥೆಯ ಪಾಡು? |
ಅದಿಗುದಿಯೆ ಗತಿಯೇನೊ? - ಮಂಕುತಿಮ್ಮ ||




ಮಂಕುತಿಮ್ಮ ಕಗ್ಗ ೫



ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು|

ದೊರೆತುದ ಹಸಾದವೆಂದುಣ್ಣು ಗೊಣಗಿಡದೆ||

ಧರಿಸು ಲೋಕದ ಭರವ ಪರಮಾರ್ಥವನು ಬಿಡದೆ|

ಹೊರಡು ಕರೆ ಬರಲ್ ಅಳದೆ ಮಂಕುತಿಮ್ಮ||


ಮಂಕುತಿಮ್ಮನ ಕಗ್ಗ ೪





ಚೆಲುವುನಗುಗಳ ಕಂಡವನ ಕಣ್ಣರಳುವುದು|
ಅಳುವುನೋವುಗಳ ಕಂಡೊದ್ದೆಯಾಗುವುದು||
ಇಳೆಯ ದನಿಗವನೆದೆಯೊಳೊಪ್ಪು ಮರುದನಿಯಹುದು|
ಶಿಲೆಯಲ್ಲ ಯೋಗಿಯೆದೆ-ಮಂಕುತಿಮ್ಮ||




Saturday, May 8, 2010

ಏಕತಾನ ದುಂಡಿರಾಜ್ ಕವನ ೩

ಬ್ಯಾಂಕ್ ಜೀವನದ
ಏಕತಾನದಿಂದ
ರೋಸಿ ಹೋಗಿ
ಎಲ್ಲ ಮರೆತು ಹಾಯಾಗಿ
ಸುತ್ತಾಡಿ ಬರಲೆಂದು
ರೈಲು ಹತ್ತಿದರೆ ಅಲ್ಲೂ
ಅದೇ ಸೊಲ್ಲು
ಚೆಕ್ ಬುಕ್ ಚೆಕ್ ಬುಕ್
ಚೆಕ್ ಬುಕ್

-----ದುಂಡಿರಾಜ್

ದುಂಡಿರಾಜ್ ಕವನ ೨

ಅಯ್ಯೋ ಪಾಪ !
ಪಾಂಚಾಲಿಯ ಕಷ್ಟ
ಹೇಳತೀರದು
ಎಲ್ಲರ ಹಾಗೆ ಗಂಡ
ಒಂದಲ್ಲ ಐದು
ಸ್ವರ ಬಿದ್ದು ಹೋಗಿ
ನೋಯುತ್ತಿದೆ ಗಂಟಲು
ಗಂಡಂದಿರನ್ನು

ಬೈದು ಬೈದು 


                                                ----- ದುಂಡಿರಾಜ್

ದುಂಡಿರಾಜ್ ಕವನ -1





ಕ್ಯಾಶ್ ಕೌಂಟರಿನ
ಹುಡುಗಿಯರ
ಮುಖದಲ್ಲಿ ನಗು
ಹುಡುಕಿದರೂ ಸಿಗದು
ಅದಕ್ಕೆ ಇರಬೇಕು
ಹಾಕಿದ್ದಾರೆ ಬೋರ್ಡು
"ನಗದು" !!!


---- ದುಂಡಿರಾಜ್